ಅಮೇರಿಕದಲ್ಲಿ ಸೀನಿದರೆ ಪ್ರಪಂಚದ ಮಿಕ್ಕೆಲ್ಲಾ ಕಡೆ ಜ್ವರ ಬರುವುದು ಹೊಸ ವಿಷಯವೇನಲ್ಲ. ಆದರೂ ಈ ಬಾರಿ ಬೇರೆ ಬೇರೆ ಕಡೆಯೂ ಛಳಿ ಜ್ವರ ಕಾಣಿಸಿಕೊಳ್ಳುತ್ತಿದೆ. ಕಳೆದ ವಾರ ಅಮೇರಿಕದ ಒಂದು “ಹೆಡ್ಜ್ ಫಂಡ್” ತನ್ನಲ್ಲಿ ಇರಿಸಿದ್ದ ಮೊತ್ತವನ್ನೆಲ್ಲಾ ಕಳೆದುಕೊಂಡ ವಿಷಯ ಹೊರ ಬರುತ್ತಲೇ ಭಾರತ ಸಮೇತ ಸುಮಾರು ದೇಶಗಳಲ್ಲಿ ಶೇರುಮಾರುಕಟ್ಟೆ ಬಿತ್ತು. ಇಂದು ಫ್ರಾನ್ಸಿನ ಪ್ರತಿಷ್ಠಿತ ಬ್ಯಾಂಕೊಂದು ಹಾಗೆಯೇ ಅಮೇರಿಕದ “ಸಬ್ ಪ್ರೈಮ್ ಮೋರ್ಟ್ಗೇಜ್” ಸಾಲಗಳಲ್ಲಿ ಹೂಡಿದ್ದ ಹಣವೆಲ್ಲಾ ಮಂಗಮಾಯ ಎಂಬ ಸುದ್ದಿ ಹೊರಬರುತ್ತಲೇ ಮಿಕ್ಕೆಲ್ಲಾ ದೇಶದ ಮಾರುಕಟ್ಟೆಯ ಕಥೆಯೇ ದೊಡ್ಡ ವ್ಯಥೆ.

ಚೀನ ಕೂಡ ಅಮೇರಿಕನ್ನರ ಜುಟ್ಟು ಹಿಡಿದು ಅಲ್ಲಾಡಿಸುತ್ತಿದ್ದಾರೆ. .ಅವರು ಅಮೇರಿಕನ್ನರ ಸಾಲಪತ್ರಗಳನ್ನು ಮಾರುವುದಾಗಿ ಹೇಳಿಕೆ ಕೊಡುತ್ತಿದ್ದಾರೆ. ಅಮೇರಿಕದವರು ಏನಾದರು ಅದನ್ನು ಕೊಳ್ಳಲಾಗಲಿಲ್ಲವೆಂದರೆ ಅವರ ಸಾರ್ವಭೌಮತ್ವಕ್ಕೆ ಭಂಗ. ಕೊಂಡರೆ (ಟ್ರಿಲಿಯನ್ಗಟ್ಟಲೆ), ಅವರ ಆರ್ಥಿಕ ಪರಿಸ್ಥಿತಿ ಮತ್ತಷ್ಟೂ ಶೋಚನೀಯ. ಆದರು ಚೀನದವರು ಏನೂ ಮಾಡಲಾರರು. ಮಾಡಿದರೆ, ಅವರ ಅತಿದೊಡ್ಡ ಮಾರುಕಟ್ಟೆಯನ್ನು ತಾವೇ ಕೊಂದಂತಾಗುವುದು. ಬರೋ ದುಡ್ಡು ಬಾರದೇ ಹೋಗಬಹುದು.

ಹಾಗಾದರೇ ಏನಾಗ್ಬಹುದು ? ಡೌನ್ಟರ್ನ್ ? ರಿಸೆಷನ್ ? ಏನಾದರೂ ಆಗಬಹುದು. ಆದರೆ ನಾವು ಎಷ್ಟರ ಮಟ್ಟಿಗೆ ತಯಾರಿದ್ದೀವಿ ?

ನಿಜವಾಗ್ಯೂ interesting times :-)

By shashi

2 thoughts on “May you live in interesting times!!”

Leave a Reply to Suma Cancel reply

Your email address will not be published. Required fields are marked *